Home

ತಾಯಿ ಆಗುವ ಹಾದಿಯಲ್ಲಿ, ಪ್ರತಿದಿನ ಮಗುವಿನಂತೆ ನಕ್ಕೆ

ಮಗುವ ನಗುವ ಉಣಬಡಿಸಲು ಬಂದಿರುವೆ

ಅಂದು 2019 ನವೆಂಬರ್ 28,  ಬೆಳಗಿನ ಜಾವ ಸುಮಾರು 3: 30ಕ್ಕೆ pregnancy ಟೆಸ್ಟ್ ಮಾಡಿಕೊಂಡೆ ಪಾಸಿಟಿವ್ ಅಂತ ಬಂತು. ಆ ಕ್ಷಣ ಆದ ಖುಷಿ ಅಷ್ಟಿಷ್ಟಲ್ಲ, ನನಗೂ ನನ್ನ ಸಂಗಾತಿಗೆ ಹೇಗ್ ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗ್ಲಿಲ್ಲ ಯಾಕಂದ್ರೆ ಖುಷಿ ವ್ಯಕ್ತ ಪಡಿಸೋಕೆ ಪದಗಳೇ ಸಿಗ್ತಿರಲಿಲ್ಲ speechless ಅನ್ನೋ ಹಾಗಿತ್ತು ಒಂದು ಕ್ಷಣ ಪೂರ್ತಿ ಮೌನ, ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ಮುಗುಳ್ನಗು ಆವರಿಸಿತ್ತು ಏನೋ ಒಂಥರಾ ಹೊಸ ಅನುಭವ. ನಮ್ಮಿಬ್ಬರ ಪ್ರೀತಿಯ ಸಂಕೇತವಾಗಿ ಇನ್ನೊಬ್ಬ ಸದಸ್ಯನ ಆಗಮನ ನಮ್ಮ ಮನೆಗು ಹಾಗೂ ಮನಸಿಗೂ.ಆ ಕ್ಷಣದಿಂದ ಜವಾಬ್ದಾರಿ ಕೂಡ ಹೆಚ್ಚಾಯ್ತು, ಗಂಡ – ಹೆಂಡತಿ ಆಗಿದ್ದ ನಾವು ಅಪ್ಪ ಅಮ್ಮ ಅಗ್ತಿದಿವಿ ಎಂದು. ಬೆಳಗಾಗುವವರೆಗೂ ಇದೇ ಮಾತು, ಇದೇ ಸಂತೋಷ. ಬೆಂಗಳೂರಿನಲ್ಲಿ ವಾಸವಾಗಿದ್ದ ನಾವು ನಂತರ ಚೆಕಪ್ ಗೆ ಅಂತ  Dr. ಜಯಂತಿ ಅವರನ್ನ ಭೇಟಿ ಮಾಡಿದಾಗ ಅಲ್ಲಿ ಕೂಡ ಕೆಲವೊಂದು ಟೆಸ್ಟ್ ಮಾಡಿಸಿದಾಗ pregnancy confirm ಅಂತ report ಕೊಟ್ಟರು ಆಗ ನನಗೆ ಮತ್ತು ನನ್ ಸಂಗಾತಿಗೆ ಕಣ್ತುಂಬಿ ಬಂತು. ಆಗ ಡಾಕ್ಟರ್ ನಮಗೆ  Dr. ಪ್ರಭ ನಂಬಿಯಾರ್ (ಹೆರಿಗೆ ತಜ್ಞರು) ಭೇಟಿ ಮಾಡಲು ಹೇಳಿದರು, ಆ ದಿನವೇ ಅವರನ್ನು ಭೇಟಿ ಮಾಡಿದಾಗ ಸ್ಕ್ಯಾನಿಂಗ್ ಮಾಡಿಸಬೇಕೆಂದು ತಿಳಿಸಿದರು. ಮರುದಿನ ಸ್ಕ್ಯಾನಿಂಗ್ ಅಂದರೆ 2019 ನವೆಂಬರ್ 30, ನನ್ನಲ್ಲಿ ಏನೋ ಒಂಥರ ಭಯ ಇತ್ತು ಹಾಗೆ ಕುತೂಹಲ ಕೂಡ ಇತ್ತು ನಂತರ ಸ್ಕ್ಯಾನಿಂಗ್ ಕೋಣೆಯಲ್ಲಿ ನನ್ನ ಮಗುವಿನ ಮೊದಲ ದರ್ಶನ ಕಂಪ್ಯೂಟರ್ ಪರದೆ ಮೇಲೆ ಹಾಗೆಯೇ ನಗುವ ನರ್ತನ ನಮ್ಮಿಬ್ಬರ ಮೊಗದ ಮೇಲೆ. ಅಬ್ಬಾ! ರೋಮಾಂಚನ ಆ ಕ್ಷಣ ಆ ದಿನ. ಮತ್ತದೇ ಮೌನ, ಕಂಗಳು ಮಾತಾಡುತ್ತಿದ್ದವು. ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ 6 ವಾರಗಳ ಮೇಲೆ 5 ದಿನಗಳಾಗಿದ್ದವು ಎಂದು ಬರೆದಿತ್ತು. ಆದರೆ ಈ 6 ವಾರಗಳಲ್ಲಿ ನಾವು ಮಾಡಿದ ಸಾಹಸಗಳು ಹಲವಾರು, ಅದು ಒಬ್ಬ ಗರ್ಭಿಣಿ ಮಹಿಳೆ ಮಾಡಲು ಅಸಾಧ್ಯವಾದಂತಾಗಿತ್ತು.ಅಂದು 2019 ನವೆಂಬರ್ 1 ರಂದು ಹೊರಟ ಬೈಕ್ ಲಾಂಗ್ ಡ್ರೈವ್ ಅದು ಅಂಬೆಗಾಲು ಕೃಷ್ಣನನ್ನು ನೋಡಲು. ಹಾದಿಯಲ್ಲಿ ಚಪ್ಪರಿಸಿದ ಬಿಡದಿ “ತಟ್ಟೆ ಇಡ್ಲಿ” ವಾಹ್!  ಅನಿವಾರ್ಯ ಕಾರಣಗಳಿಂದ ಮತ್ತೇ 2019 ನವೆಂಬರ್ 9ರಂದು ರೈಲು ಪ್ರಯಾಣ ಉತ್ತರ ಕರ್ನಾಟಕದ ತವರಿನ ಕಡೆಗೆ, ತದನಂತರ ಮತ್ತೇ 2019 ನವೆಂಬರ್ 24 ರಂದು  ಬಸ್ ನ ಪ್ರಯಾಣ ತಿರುಪತಿ ಕಡೆಗೆ, ತಿಮ್ಮಪ್ಪನನ್ನು ನೋಡಲು ಮಾಡಿದ ತಿರುಪತಿ temple run . ಆಸ್ಪತ್ರೆಯಲ್ಲಿ ಈ 6 ವಾರಗಳು 5 ದಿನಗಳ ನಂತರ Dr. ಪ್ರಭ ರವರನ್ನು ಭೇಟಿ ಮಾಡಲು ಹೋದಾಗ ಅವರು ಕೆಲವು ಸಲಹೆಗಳನ್ನು ಕೊಟ್ಟರು, ಮಾತ್ರೆಗಳು, ಪ್ರೋಟಿನ್ ಪೌಡರ್, ಜೊತೆ ಜೊತೆಗೆ ಸಕಾರಾತ್ಮಕವಾಗಿ ಯೋಚಿಸುವುದು ಅತೀ ಅವಶ್ಯ , ಅನಾವಶ್ಯಕವಾಗಿ ಪ್ರಯಾಣ ಮಾಡುವುದು, ಭಾರವಾದ ವಸ್ತುಗಳನ್ನು ಎತ್ತುವುದು, ಅವಸರದಿಂದ ನಡೆದಾಡುವುದು ನಿಲ್ಲಿಸುವುದಾಗಿ ಹೇಳಿದರು ಇದಲ್ಲದೇ ನಾಜೂಕಾಗಿ ಕೂತುಕೊಳ್ಳುವುದು, ಶಾಲೆಯಲ್ಲಿ ತರಗತಿ ತೆಗೆದುಕೊಳ್ಳುವಾಗ, ಮಕ್ಕಳು ಓಡಿ ಬರುವ ಪ್ರಸಂಗಗಳಲ್ಲಿ ಅತೀ ಹೆಚ್ಚು  ಜಾಗರೂಕತೆಯಿಂದ ವರ್ತಿಸುವುದಾಗಿ ಹೇಳಿದರು. ಇದೆಲ್ಲವನ್ನೂ ಕೇಳಿಸಿಕೊಂಡು ನನಗು ನನ್ನ ಸಂಗಾತಿಗು ನಗು ಬಂತು, ಯಾಕೆಂದರೆ ಕಳೆದ ಈ 25 ದಿನಗಳಲ್ಲಿ ನಾವು ಮಾಡಿದ ಸಾಹಸಗಳನ್ನು ನೆನೆದು.
ಆವಾಗಿನಿಂದ ನಮಗೆ ಕನಸಿನ ಕೂಸಿನ ಬರುವಿಕೆಗಾಗಿ ಕಾಯುವುದು ಕಾಯಕವಾಯ್ತು. ಅದುವರೆಗೆ ನಮ್ಮಿಬ್ಬರಿಗಷ್ಟೇ ತಿಳಿದಿದ್ದ ಸಿಹಿ ಸುದ್ದಿ ಮನೆ ಮಂದಿಗೂ ತಿಳಿಸೋ ಸಮಯ ಬಂತು.ಮನೆಗೆ ಬಂದು ನಮ್ ಅತ್ತೆ, ಮಾವ, ನಾದಿನಿ, ಹಾಗೂ ನಮ್ ಅಪ್ಪ ಅಮ್ಮ ತಂಗಿಯಂದಿರಿಗೆ ವಿಷಯ ತಿಳಿಸಿದ ತಕ್ಷಣ ಅವರೆಲ್ಲರ reaction ಇನ್ನು ಕಣ್ಮುಂದೆ ಹಾಗೆ ಇದೆ. ಎಲ್ಲರಿಗೂ ಖುಷಿ, ಅವರವರ ಸ್ಥಾನ ಬದಲಾಯ್ತು ಅತ್ತೆ, ಮಾವ, ಅಪ್ಪ, ಅಮ್ಮ ಈಗ ಅಜ್ಜ, ಅಜ್ಜಿ, ನಾದಿನಿ ಈಗ ಅತ್ತೆ ಮತ್ತು ನನ್ನ ತಂಗಿಯಂದಿರು ಈಗ ಚಿಕ್ಕಮ್ಮಗಳು ಆಗ್ತಾ ಇರೋ ಸಂತೋಷ.
ಶಾಲೆಯಲ್ಲಿ ಟೀಚರ್ ಆಗಿ ಸೇವೆ ಸಲ್ಲಿಸುತ್ತಿದ್ದ ನನಗೆ ಮಕ್ಕಳಂದರೆ ಬಲು ಪ್ರೀತಿ ಅಕ್ಕರೆ, ಮಕ್ಕಳ ಜೊತೆ ಒಡನಾಡಿ, ಕಲಿಸುವುದು ಅವರಿಂದ ಕಲಿಯುವುದು ದಿನಚರಿಯಾಗಿತ್ತು. ಅಂತಹದ್ರಲ್ಲಿ ನನ್ನ ಪುಟ್ಟ ಲೋಕಕ್ಕೆ ಪುಟ್ಟ ಪುಟ್ಟ ಕನಸನ್ನ ಹೊತ್ತು ಬರೋ ಕಂದನ ಆಗಮನದ ದಾರಿ ಕಾಯುವುದು ಕೂಡ ದಿನಚರಿಯ ಭಾಗವಾಗಿ ಬಿಡ್ತು. ಇದೊಂದು ವಿಶೇಷ ಭಾವನೆ.ಇನ್ನೊಂದು ಬದಲಾವಣೆ ಏನಪ್ಪಾ ಅಂದ್ರೆ ನಮ್ಮ ಬೈಕ್ ನ ವೇಗ 15-20kmph ಅಷ್ಟಾಗಿತ್ತು.

ಮುಂದಿನ ಕಥೆ blog ನಲ್ಲಿ ಅತೀ ಶೀಘ್ರದಲ್ಲಿ update ಮಾಡಲಾಗುತ್ತದೆ…..

sushmav072@gmail.com

Design a site like this with WordPress.com
Get started